ಅಲ್ಯೂಷಿಯನ್ ದ್ವೀಪಗಳು ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ. (ಯು.ಎಸ್.ಎ.) ಸುಮಾರು 150 ದ್ವೀಪಗಳಿವೆ. ಇವು ಅಲಾಸ್ಕ ಪರ್ಯಾಯದ್ವೀಪದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5,600. == ಭೌಗೋಳಿಕ == ಪ್ರಮುಖ ದ್ವೀಪ ಸಮೂಹಗಳೆಂದರೆ; ಪಾಕ್ಸ್‌ ದ್ವೀಪಗಳು, ಫೋರ್‌ ಮೌಂಟೇನ್ಸ್‌ ದ್ವೀಪಗಳು, ಆಂಡ್ರಿಯನ್ ಆಫ್ ದ್ವೀಪಗಳು ಮತ್ತು ಅಟ್ಟುದ್ವೀಪವನ್ನೊಳ ಗೊಂಡ ನಿಯರ್ ದ್ವೀಪಗಳು - ಇವು ಜ್ವಾಲಾಮುಖಿ ಕಾರ್ಯದಿಂದ ಆದುವು. ಅನೇಕ ಲುಪ್ತ ಹಾಗೂ ಜ್ವಲಂತ ಜ್ವಾಲಾಮುಖಿಗಳಿವೆ. == ಹವಾಮಾನ == ಸಾಗರಿಕ ವಾಯುಗುಣವಿದ್ದು ವರ್ಷವೆಲ್ಲ ಮಳೆ ಬೀಳುತ್ತದೆ. ವರ್ಷದ ಬಹುಕಾಲ ವಾತಾವರಣ ದಟ್ಟ ಮಂಜಿನಿಂದ ಕೂಡಿದ್ದು, ಸರಾಸರಿ 380 ಸೆಂ. ಉಷ್ಣತೆಯಿರುತ್ತದೆ. ಪೈರು ಬೆಳೆಯುವ ಅವಧಿ ಸುಮಾರು 135 ದಿವಸಗಳು. == ವಾಣಿಜ್ಯ == ಇಲ್ಲಿಯ ನಿತ್ಯಹರಿದ್ವರ್ಣದ ಕೋನಿಫರಸ್ ಕಾಡುಗಳಲ್ಲಿ ಮೃದು ಮರ ದೊರೆತರೂ ಆ ಬಗ್ಗೆ ಕೈಗಾರಿಕೆ ಬೆಳೆದಿಲ್ಲ. ಮೀನುಗಾರಿಕೆ, ಬೇಟೆ ಜನರ ಮುಖ್ಯ ಉದ್ಯೋಗಗಳು. ಪ್ರಮುಖ ರೇವು ಹಾಗೂ ವ್ಯಾಪಾರ ಕೇಂದ್ರವಾದ ಯುನಲಾಸ್ಕ ಅತಿ ದೊಡ್ಡ ಪಟ್ಟಣ. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾ ನೆಲೆ ಇದೆ. == ರಾಜಕೀಯ == ಈ ದ್ವೀಪ ಸ್ತೋಮಗಳನ್ನು ಮೊದಲಿಗೆ ಕಂಡು ಹಿಡಿದವರು. ರಷ್ಯನ್ನರು (1741) ಆ ಮುಂಚೆ ಅಲ್ಲಿ ಮೂಲ ನಿವಾಸಿಗಳಿದ್ದರು. ಈಗ ಅವರ ಸಂತತಿ ನಶಿಸಿದೆ. 1867 ರಲ್ಲಿ ರಷ್ಯ ಈ ದ್ವೀಪಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿತು. == ಉಲ್ಲೇಖಗಳು == .. 9, 7, 2015-01-09 ವೇಬ್ಯಾಕ್ ಮೆಷಿನ್ ನಲ್ಲಿ. .. : ಅಲ್ಯೂಷಿಯನ್ ದ್ವೀಪಗಳು == ಬಾಹ್ಯ ಸಂಪರ್ಕಗಳು ==